ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರದೇಶವನ್ನು ತುಳು ನಾಡು ಎಂದು ಕರೆಯುತ್ತಾರೆ. ಈ ಹಿಂದೆ ಈ ಎರಡು ಜಿಲ್ಲೆಗಳು ದಕ್ಶಿಣ ಕನ್ನಡ ಜಿಲ್ಲೆಯ ಭಾಗವೇ ಆಗಿತ್ತು. ಆಗಷ್ಟ್ ೧೯೯೭ರಂದು ಉಡುಪಿ ಜಿಲ್ಲೆಯು ಇದರಿಂದ ಬೇರ್ಪಟ್ಟಿತು. ಸಾಂಸೃತಿಕವಾಗಿ ಕಾಸರಗೋಡು ಜಿಲ್ಲೆಯೂ ಸಹ ತುಳುನಾಡಿನ ಭಾಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೫ ತಾಲೂಕುಗಳಿವೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ. ಉಡುಪಿ ಜಿಲ್ಲೆಯಲ್ಲಿ ೩ ತಾಲೂಕುಗಳಿವೆ. ಅವು ಉಡುಪಿ, ಕಾರ್ಕಳ ಹಾಗೂ ಕುಂದಾಪುರ. ತುಳುನಾಡು ಅನೇಕ ದೇವಸ್ಥಾನಗಳಿಗೆ ಪ್ರಸಿದ್ಧವಾಗಿವೆ. ವಿಷ್ಣು, ಶಿವ ಹಾಗೂ ದುರ್ಗಾ ಮಾತೆಯರ ದೇವಸ್ಥಾನಗಳು ಇಲ್ಲಿ ಹೆಸರುವಾಸಿ ಆಗಿವೆ.ತಾಲೂಕುಗಳ ಅನುಸಾರ ತುಳುನಾಡಿನ ಪ್ರಸಿದ್ಧ ದೇವಸ್ಥಾನಗಳು ಇಂತಿವೆ. ಉಡುಪಿ ತಾಲೂಕಿನ ದೇವಸ್ಥಾನಗಳು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕುಂಜರುಗಿರಿ ಶ್ರೀ ಪಜಕ ಕ್ಷೇತ್ರ ಕುಂದಾಪುರ ತಾಲೂಕಿನ ದೇವಸ್ಥಾನಗಳು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಶ್ರೀ ಬ್ರಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಕಾರ್ಕಳ ತಾಲೂಕಿನ ದೇವಸ್ಥಾನಗಳು ಬೆಳ್ಮಣ್ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಪೊಸ್ಸಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹೀಗೆ ವಿವಿಧ ತಾಲೂಕುಗಳಲ್ಲಿ ಅನೇಕ ದೇವಸ್ಥಾನಗಳಿವೆ.